ಸ್ವತಂತ್ರವಾಗಿ ಉಚ್ಚರಿಸಲಾಗದ ಅಕ್ಷರಗಳು ‘ವ್ಯಂಜನ’ಗಳಾಗಿವೆ. ಸ್ವರಗಳ ಸಹಾವಿಲ್ಲದೆ ವ್ಯಂಜನಗಳ ಉಚ್ಚಾರ ಸಾಧ್ಯವಿಲ್ಲ. ಉದಾ : ಕ್+ಅ=ಕ. ವ್ಯಂಜನ ಸಂಜ್ಞೆಗಳಲ್ಲಿ ‘ಕ್’ಕಾರದಿಂದ ‘ಮ್’ಕಾರದವರೆಗೆ ಒಟ್ಟು 25 ಅಕ್ಷರಗಳಿವೆ. ವ್ಯಂಜನದ ಒಳವರ್ಗಗಳಿದ್ದು ಅವುಗಳನ್ನು ವರ್ಗೀಕರಿಸಲು ಸಾಧ್ಯ. ಹೀಗೆ ವರ್ಗೀಕರಿಸಲು ಸಾಧ್ಯವಾಗುವ ಅಕ್ಷರಗಳನ್ನು ವರ್ಗೀಯ ವ್ಯಂಜನಗಳು ಎಂದು ಕರೆಯುತ್ತಾರೆ, ವರ್ಗೀಯ ವ್ಯಂಜನಗಳನ್ನು ಹೇಗೆ ಬೇಕಾದರೂ ವರ್ಗೀಕರಿಸಲು ಸಾಧ್ಯ. ವರ್ಗ ‘ಕ್’ವರ್ಗದ ವ್ಯಂಜನಗಳು - ಕ್ ಖ್ ಗ್ ಘ್ ಙ - 5 ‘ಚ್’ವರ್ಗದ ವ್ಯಂಜನಗಳು - ಚ್ ಛ್ ಜ್ ಝ್ ಞ - 5 ‘ಟ್’ವರ್ಗದ ವ್ಯಂಜನಗಳು – ಟ್ ಠ್ ಡ್ ಢ್ ಣ - 5 ‘ತ್’ವರ್ಗದ ವ್ಯಂಜನಗಳು – ತ್ ಥ್ ದ್ ಧ್ ನ್ - 5 ‘ಪ್’ವರ್ಗದ ವ್ಯಂಜನಗಳು - ಪ್ ಫ್ ಬ್ ಭ್ ಮ್ - 5 == ವರ್ಗೀಯ ವ್ಯಂಜನಗಳು ಭಾಷಾವಿಜ್ಞಾನದ ನೆಲೆಯಲ್ಲಿ ವರ್ಗಗಳಾಗಿ == == ಉಚ್ಛಾರದ ನೆಲೆಯಲ್ಲಿ ವರ್ಗೀಯಗಳು == == ಅಲ್ಪಪ್ರಾಣ == ಈ ವರ್ಗಾಕ್ಷರಗಳಲ್ಲಿ ಪ್ರತಿ ವರ್ಗದ ಪ್ರಥಮ, ತೃತೀಯ ವರ್ಗದ ಕ್, ಚ್ , ಟ್ , ತ್ , ಪ್, ಗ್ , ಜ್ , ಡ್ , ದ್ , ಬ್ ಅಕ್ಷರಗಳನ್ನು ‘ಅಲ್ಪಪ್ರಾಣ’ ಅಥವಾ ಸರಳವೆಂದು ಕರೆಯುತ್ತಾರೆ. ಅಲ್ಪ ಉಸಿರಾಟದಲ್ಲಿ ಉಚ್ಚರಿಸುವ ವ್ಯಂಜನಗಳು. == ಮಹಾಪ್ರಾಣ == ದ್ವಿತೀಯಾ, ಚತುರ್ಥ ವರ್ಗದ ಖ್ , ಛ್ , ಠ್ , ಥ್, ಫ್, ಘ್ , ಝ್ , ಢ್ , ಧ್ , ಭ್ ಅಕ್ಷರಗಳನ್ನು ‘ಮಹಾಪ್ರಾಣ ಅಕ್ಷರ’ ಅಥವಾ ಪರುಷಾಕ್ಷರವೆಂದು ಕರೆಯುತ್ತಾರೆ. ನಿಟ್ಟುಸಿರಿನೊಂದಿಗೆ ನಾಭಿಮೂಲದಿಂದ ಉಚ್ಚರಿಸುವ ವ್ಯಂಜನಗಳು ಮಹಾಪ್ರಾಣ ಅಕ್ಷರಗಳು. == ಅನುನಾಸಿಕ == ವರ್ಗದ ಪಂಚಮಾಕ್ಷರ ಙ್ , ಞ್ , ಣ್ , ನ್, ಮ್ ಗಳನ್ನು ‘ಅನುನಾಸಿಕ ಅಕ್ಷರ’ವೆಂದು ಕರೆಯುತ್ತಾರೆ. ಅನುನಾಸಿಕ ಎಂದರೆ ಮೂಗಿನ ಸಹಾಯದಿಂದ ಉಚ್ಚರಿಸುವ ಅಕ್ಷರಗಳು. == ಉಲ್ಲೇಖ ==